ಚೇತನ್ ಕನ್ನಡ ಚಲನಚಿತ್ರ ನಟ. ಅಮೆರಿಕಾದಲ್ಲಿ ಹುಟ್ಟಿ, ಅಲ್ಲೇ ವ್ಯಾಸಂಗ ಮುಗಿಸಿ, ಭಾರತದಲ್ಲಿ ನಟರಾಗಿದ್ದುಕೊಂಡು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. == ಜನನ/ವಿದ್ಯಾಭ್ಯಾಸ == ಚೇತನ್ ಹುಟ್ಟಿದ್ದು (೨೪ ಫೆಬ್ರವರಿ ೧೯೮೩) ಅಮೆರಿಕೆಯ ಚಿಕಾಗೋ ನಗರದಲ್ಲಿ. ಚಿತ್ರದುರ್ಗ ಮೂಲದ ಲಿಂಗಾಯತ ಸಮಾಜದ ಈ ಕುಟುಂಬ ಸಾಕಷ್ಟು ವರ್ಷಗಳ ಹಿಂದೆ ಅಮೆರಿಕೆಯಲ್ಲಿ ನೆಲೆಸಿದೆ. ಚೇತನ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದದ್ದು ಅಮೇರಿಕೆಯ ಪ್ರತಿಷ್ಠಿತ ಶಾಲೆಗಳಲ್ಲಿ. ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಿದ್ದು ಅಮೇರಿಕೆಯ ಯೇಲ್ ವಿಶ್ವವಿದ್ಯಾಲಯದಲ್ಲಿ. == ಕಲಾವಿದರಾಗಿ == ಆಧುನಿಕ ನೃತ್ಯ ಪರಿಣಿತಿಯ ಜೊತೆಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನದಲ್ಲೂ ಪಳಗಿದ್ದಾರೆ. ಪಾಶ್ಚಾತ್ಯ ಜಾಜ್ ಸಂಗೀತ, ಭಾರತೀಯ ಶಾಸ್ತ್ರೀಯ ಸಂಗೀತ, ಸ್ಯಾಕ್ಸೋಫೋನ್ ವಾದ್ಯದಲ್ಲಿ ನುಡಿಸಬಲ್ಲರು. 2007ರಲ್ಲಿ 'ಆ ದಿನಗಳು' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಲ್ಲಿಯವರೆಗೆ 6 ಸಿನೆಮಾಗಳಲ್ಲಿ ನಟಿಸಿದ್ದಾರೆ. == ನಟಿಸಿದ ಚಿತ್ರಗಳು == ಆ ದಿನಗಳು ಮೈನಾ ಬಿರುಗಾಳಿ ರಾಜ ರಾಣಿ ದಶಮುಖ ನೂರೊಂದು ನೆನಪು ಅತಿರಥ ರಣಂ == ಉಲ್ಲೇಖ ==